Copy of U S Visit 2008 - Kizoa Movie Maker
MRIGASHIRA
Wednesday, October 13, 2021
Tuesday, May 18, 2021
Friday, April 10, 2020
ಆಹ್ಲಾದಕರ ಸಾಧಕರು -ಅ.ನಾ.ಪ್ರಹ್ಲಾದರಾಯರು
(ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
(ಕೋಲಾರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು)
ಕೆಲವರಿಗೆ ಪ್ರಶಸ್ತಿಗಳು ಬಂದಾಗ ಅನುಮಾನಗಳ ಹುತ್ತ ಮನದೊಳಗೆ ಸುತ್ತುವರೆಯುತ್ತವೆ ಇನ್ನೂ ಕೆಲವರಿಗೆ ಪ್ರಶಸ್ತಿಗಳು ಬಂದರೆ ಇದುವರೆಗೂ ಇಂಥ ಸಾಧಕರಿಗೆ ಈ ಪ್ರಶಸ್ತಿ ಬಂದಿರಲಿಲ್ಲವೇ ಎಂಬ ಅನುಮಾನ ಹುಟ್ಟಿಬಿಡುತ್ತವೆ.
ಕೋಲಾರದ ಅಬ್ಬಣಿ ನಾರಾಯಣರಾವ್ ಪ್ರಹ್ಲಾದರಾವ್, ಅನಾಪ್ರ,ಪದಬಂಧದ ಪ್ರಹ್ಲಾದರಾಯರ ಸಾಧನೆಗೆ ಗಾಂಭೀರ್ಯವಿದೆ,ಭೂಮಿತೂಕದ ಸಹನೆಯ ಮನೋಧರ್ಮವಿದೆ ,ಆದ್ದರಿಂದಲೇ ೨೬ರ ಜವ್ವನದ ಏರುಬಿಸುಪಿನಲ್ಲಿ ಕೋಲಾರದ ಗೆಳೆಯರ ಜೊತೆಗೂಡಿ ಹೊನ್ನುಡಿ ಪತ್ರಿಕೆ ಶುರು ಮಾಡಿದ ಪ್ರಹ್ಲಾದರಾಯರ ಆ ತುಡಿತ,೧೯೭೫ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟಾಗ ಕೇವಲ ೨೨ರ ವಯೋಮಾನದಲ್ಲೇ ಅಕ್ಷರ ಪ್ರಪಂಚದ ಅಕ್ಕರೆಯ ಕರೆಗೆ ತಮ್ಮನ್ನು ಆಗುಮಾಡಿಕೊಂಡ ಕರ್ತೃತ್ವಶಕ್ತಿ,ಕ್ಷಮತೆ ಅಸಾಮಾನ್ಯವಾಗಿ ಕಾಣಿಸುತ್ತದೆ.
ಪದಬಂಧದ ಮಹತ್ಸಾಧಕರು ಅನಾಪ್ರ-ಸೃಜನಶೀಲತೆಯ ಹರಹನ್ನು ಮೈಗೂಡಿಸಿಕೊಂಡು ಅದನ್ನು ಸುದೀರ್ಘ ಕಾಲದ ನಿರಂತರತೆಯನ್ನಾಗಿ ಉಳಿಸಿಕೊಳ್ಳುವ ಕಷ್ಟಕರ ಕೆಲಸವನ್ನು ಇಷ್ಟಪಟ್ಟು ಉಳಿಸಿಕೊಂಡ ಜೀವಸೆಲೆಯ ವ್ಯಕ್ತಿತ್ವ ಅನಾಪ್ರ ಅವರದ್ದು.
ಇದುವರೆಗೂ ಮೂವತ್ತಾರು ಸಾವಿರ(೩೬,೦೦೦) ಪದಬಂಧಗಳ ರಚನೆ,ನಾಲ್ಕು ಲಕ್ಷಕ್ಕೂ ಮೀರಿದ ಅದರ ಸುಳುಹುಗಳು ಭೀಮಸದೃಶ ಸಾಧನೆ ಮಾತ್ರವಲ್ಲ, ಪರ್ವತ ಸಂಯಮದ ಅಚ್ಚಳಿಯದ ಹೆಗ್ಗುರುತು. ಜೊತೆಗೆ ಅವರ ಪದಬಂಧದ ಹಾಸುಬೀಸು ಮತ್ತು ಅದರ ವ್ಯಾಪ್ತಿ ಪ್ರದೇಶ ಏಕಮುಖವಲ್ಲ, ಸಾಮಾಜಿಕ,ಸಾಂಸ್ಕೃತಿಕ, ವಿಶ್ವ..ಸಿನಿಮಾ.. ಹೀಗೆ ಅನೇಕಾನೇಕ ವಿಷಯಗಳ ಅಸೀಮಲೋಕದ ಪದಬಂಧಗಳ ಪ್ರಹ್ಲಾದರಾಯರಿಗೆ ಇಷ್ಟಾದರೂ ಬೀಗುವ ಮನವಲ್ಲದ, ಬಾಗುವ ವಿನೀತ ಗುಣ.
ಜ್ಞಾನದ ಹಂಬಲಕ್ಕೆ ಇಂಬಾಗುವ ಬೌದ್ಧಿಕ ವಿನ್ಯಾಸದ ವಿಕಾಸಕ್ಕೆ ಅರಳಿಕೊಳ್ಳುವ ಈ ಪದಬಂಧಗಳನ್ನು ಸೃಜನಾತ್ಮಕವಾಗಿ ಹರಡಿಸಿದ ಅನಾಪ್ರ ಏಷ್ಯಾದಲ್ಲೇ ಪ್ರಾದೇಶಿಕ ಭಾಷೆಯೊಂದರಲ್ಲಿ ಅತ್ಯಧಿಕ ಪದಬಂಧ ರಚನೆ ಮಾಡಿದ ಲಿಮ್ಕಾದಾಖಲೆಗೆ ಭಾಜನರಾಗಿರುವ ಅಪ್ರತಿಮರು.
ಆದರೆ ಈ ಕ್ಷೇತ್ರದ ಅವರ ಸಾಧನೆಗೆ ಭೇಷ್ ಎನ್ನುತ್ತಲೇ ಪದಬಂಧಗಳನ್ನು ಕುರಿತೇ ೧೦ಕ್ಕೂ ಅಧಿಕ ಕೃತಿಗಳನ್ನು ತಂದಿರುವಅನಾಪ್ರ ಅವರ ಸಾಮರ್ಥ್ಯಕ್ಕೆ ಅಭಿನಂದಿಸಿದರೂ ಇದೊಂದೇ ಅವರ ಕ್ಷೇತ್ರವೆಂದು ಭಾವಿಸಿದರೆ ಅದು ತಪ್ಪಾಗುತ್ತದೆ.
ಅನಾಪ್ರ ಅವರಲ್ಲಿ ಕವಿ ಇದ್ದಾನೆ,ಅದು ವಸಂತಮಲ್ಲಿಕಾ ಎಂಬ ಅವರ ಕವನಸಂಕಲನದಲ್ಲಿ ವೇದ್ಯವಾಗುತ್ತದೆ. ಬಂಗಾರದ ಮನುಷ್ಯ ಕೃತಿ ಡಾ. ರಾಜಕುಮಾರ್ ಅವರ ಹೆಜ್ಜೆಗಳನ್ನು ಕನಸಿನಲೋಕದ ಮೂಲಕ ಅನಾವರಣ ಗೊಳಿಸಿದೆ. ಈ ಕೃತಿಯನ್ನೋದಿ ರಾಜ್ ದಂಪತಿಗಳು ಮನೆಗೇ ಕರೆಸಿ ಆಪ್ತವಾಗಿ ಅನಾಪ್ರ ದಂಪತಿಯನ್ನು ಗೌರವಿಸಿದ್ದರು. ಪಾರ್ವತಮ್ಮ ರಾಜಕುಮಾರ್ ಅವರು ಪತಿಯ ಬಗ್ಗೆ ನುಡಿದ ಮಾತುಗಳು ಅನಾಪ್ರ ಅವರಿಂದ ಪ್ರಾಣಪದಕ ಎಂಬ ಕೃತಿ ರಚಿಸುವಂತೆ ಮಾಡಿದೆ. ಸಾರ್ವಜನಿಕ ಸಂಪರ್ಕಾಧಿಕಾರಿ ಆಗಿದ್ದುಕೊಂಡು ಸರಕಾರಿ ಹುದ್ದೆಯಲ್ಲಿದ್ದ ಅನಾಪ್ರ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶ್ರೀ ಜೈರಾಜ್ ಅವರ ಆಂಗ್ಲ ಕೃತಿಯನ್ನು ಕನ್ನಡಕ್ಕೆ ಜೈತ್ರಯಾತ್ರೆ ಎಂದು ಕನ್ನಡಿಸಿದ್ದಾರೆ.
ಬೆಳ್ಳಿತೆರೆ ಬೆಳಗಿದವರು ಕೃತಿ ೧೧೨ಬೆಳ್ಳಿತೆರೆ ಕಲಾವಿದರ ಸಾಧನೆಗಳಿಂದ ಕಂಗೊಳಿಸುವ ಕೃತಿ. ಕನ್ನಡಿಗ ರಜನೀಕಾಂತ್ ಅವರ ಬದುಕು-ಚಿತ್ರಬದುಕನ್ನು ಕುರಿತ ನನ್ನ ದಾರಿ ವಿಭಿನ್ನ ದಾರಿ..ಅನಾಪ್ರ ಅವರ ಸುಸ್ತಾಗದ ಸೃಷ್ಟೀಶೀಲತೆಯ ಬರಹದ ತವನಿಧಿತ್ವಕ್ಕೆ ಸಾಕ್ಷಿ.
ಪಂತುಲು ಅವರನ್ನು ಕುರಿತು ದಣಿವಿಲ್ಲದ ಧಣಿ ಅನಾಪ್ರ ಅವರ ಮತ್ತೊಂದು ಮಹತ್ವದ ಕೃತಿ. ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವಕ್ಕಾಗಿ ೨೦೦೯ರಲ್ಲಿ ಬರೆಸಿದ ೭೫ ಹೊತ್ತಗೆ ಗಳಲ್ಲಿ ಡಾ.ರಾಜಕುಮಾರ್, ಟಿ.ಎಸ್.ಕರಿಬಸಯ್ಯ
(ಸ್ಟುಡಿಯೋ ಮಾಲಿಕರು)ಕೃತಿಗಳನ್ನು ಬರೆದ ಅನಾಪ್ರ ಸಹಾ ದಣಿವರಿಯದ ಸಾರ್ಥಕ ಸಾಧಕರು.ಪದಬಂಧು ಇವರ ೬೦ನೇ ವರ್ಷದ ಸಂದರ್ಭದಲ್ಲಿ ಹೊರಬಂದ ಅಭಿನಂದನಾಗ್ರಂಥ.
(ಸ್ಟುಡಿಯೋ ಮಾಲಿಕರು)ಕೃತಿಗಳನ್ನು ಬರೆದ ಅನಾಪ್ರ ಸಹಾ ದಣಿವರಿಯದ ಸಾರ್ಥಕ ಸಾಧಕರು.ಪದಬಂಧು ಇವರ ೬೦ನೇ ವರ್ಷದ ಸಂದರ್ಭದಲ್ಲಿ ಹೊರಬಂದ ಅಭಿನಂದನಾಗ್ರಂಥ.
ಈಗ ತಮ್ಮ ೬೬ನೇ ವಯಸ್ಸಿನಲ್ಲಿ ಮೊಮ್ಮಕ್ಕಳೊಡನೆ ಕಾಲ ಕಳೆಯುತ್ತಿರುವುದೂ ಸುಮಾರು ೧೦೦ದಿನಗಳಾಗುತ್ತಿದೆ ಎಂದರು.ಈ ಶತದಿನೋತ್ಸವವೂ ಬಹಳ ಸಂಪ್ರೀತಿಯ ಘಟ್ಟವೇ ಹೌದು.
ಅನಾಪ್ರ ಅವರ ವಯಸ್ಸು, ಅರಿವು,ಸಾಧನೆ,ಅನುಭವ ಎಲ್ಲದರ ಹಿನ್ನೆಲೆಯಲ್ಲಿ ನೋಡಿದರೂ ಅವರಿಗಿಂತ ನಾನು ಈ ಎಲ್ಲ ಅಂಶಗಳಲ್ಲೂ ಬಹಳ ಬಹಳ ಕಿರಿಯ.ನನ್ನ ಕೃತಿ ಸಿನಿಪಯಣಕ್ಕೆ ಮುನ್ನುಡಿ ಬರೆದದ್ದಾಗಲೀ,ಇಂದಿಗೂ ಅತ್ಯಂತ ಆಪ್ತರಾಗಿರುವ ಅವರ ಮತ್ತು ನನ್ನ ಬಾಂಧವ್ಯ ಅವರ ಸೋದರ ಕೋಲಾರದ ಮಲ್ಲಿಕಾ ಕ್ಯಾಸೆಟ್ಸ್ ನ ಪ್ರಕಾಶರಾಯರ ಗೆಳೆತನಕ್ಕೆ ಧನ್ಯೋಸ್ಮಿ ಎನ್ನಲು ನನಗೆ ಸಹಜಾತಿ ಸಹಜವಾದ ಹೃದ್ಯ ಸಂತೋಷವಿದೆ.
ಪ್ರಶಸ್ತಿಗಳನ್ನು ಪಡೆಯುವ ಹಪಾಹಪಿತನವಿಲ್ಲದಿದ್ದರೂ ಅನಾಪ್ರ ಅವರ ವ್ಯಕ್ತಿತ್ವ ಅವರ ಸಾಧನೆಗೆ ಇಷ್ಟು ವರ್ಷ ಗಳಾದರೂ ಕೋಲಾರದ ಅಬ್ಬಣಿಯ ಪ್ರಹ್ಲಾದರಾಯರನ್ನು ಗುರುತಿಸದಿದ್ದಕ್ಕೆ ನನಗೆ ಬರೀ ಆಶ್ಚರ್ಯವಲ್ಲ,ಬೇಸರಮಿಶ್ರಿತ ಸೋಜಿಗವಾದ ಸಖೇದಾಶ್ಚರ್ಯವಾಗಿತ್ತು.ಆದರೆ ಈಗ ಕೋಲಾರ ಜಿಲ್ಲೆ ಅನಾಪ್ರ ಅವರಿಗೆಈ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಿರುವುದು ಅನಾಪ್ರ ಅವರಿಗೂ, ಕೋಲಾರ ಜಿಲ್ಲೆಗೂ ಸಮಸ್ತ ಕನ್ನಡಿಗರಿಗೂ ಹೆಮ್ಮೆಯ ಸಂಗತಿ.ಇಂಥ ಸಜ್ಜನ,ಸಂಭಾವಿತ ವ್ಯಕ್ತಿತ್ವದ ಅ.ನಾ.ಪ್ರಹ್ಲಾದರಾಯರ ಸಾಂಗತ್ಯ,ಸಖ್ಯ ನನಗೂ ನಿಡುಗಾಲದ ಆಪ್ಯಾಯತೆ ಮತ್ತು ಅನುರಣನಗೊಳ್ಳುತ್ತಲೇ ಇರುವ ಶುದ್ಧ ಮೈತ್ರಿಬಂಧಕ್ಕೆ ನಿದರ್ಶನವಾಗಿದೆ.
ಅನಾಪ್ರ ನಿಮಗೆ,ನಿಮ್ಮ ದೃಢ ಸಂಕಲ್ಪಬಲದ ಸಾಧನೆಗೆ,ಸಂದ ಗೌರವಕ್ಕೆ ನನ್ನ ನಲುಮೆಯ ನಮಸ್ಕಾರ, ಅಭಿನಂದನೆಗಳು.
ಅಲ್ಪಮಾಹಿತಿ
ಶ್ರೀನಿವಾಸ ಪ್ರಸಾದ್ ಡಿ.ಎಸ್.
ಕೋಲಾರ
ಶ್ರೀನಿವಾಸ ಪ್ರಸಾದ್ ಡಿ.ಎಸ್.
ಕೋಲಾರ
ನನ್ನ ಬಾಲ್ಯದಲ್ಲಿ ನಮ್ಮೂರಿನಲ್ಲಿ ವಾಸುದೇವಪ್ಪನವರ ಕುಟುಂಬವಿತ್ತು. ಇವರು ನಮ್ಮ ದಾಯಾದಿ ಬಂಧುಗಳು. ನಮ್ಮ ಮನೆಯಲ್ಲಿ ನಡೆಯುತ್ತಿದ್ದ ನನ್ನ ಅಜ್ಜ ಅಜ್ಜಿಯರ ವಾರ್ಷಿಕ ಪುಣ್ಯತಿಥಿಗೆ ಅವರು ಊಟಕ್ಕೆ ಬರುತ್ತಿದ್ದರು. ಅವರ ಮನೆಗೆ ನಾವೂ ಹೋಗುತ್ತಿದ್ದೆವು. ಮತ್ತೊಬ್ಬರ ಮನೆಗೆ ಊಟಕ್ಕೆ ಹೋಗುವಾಗ ಕುಡಿಯುವ ನೀರಿನ ಲೋಟಗಳನ್ನು ಅವರವರೇ ತೆಗೆದುಕೊಂಡು ಹೋಗುತ್ತಿದ್ದೆವು. ಊಟದ ನಂತರ ನಮ್ಮ ಲೋಟಗಳನ್ನು ಹಿಂದಕ್ಕೆ ತರುತ್ತಿದ್ದೆವು. ವಾಸಪ್ಪನವರ ಸಹೋದರ ಗೋವಿಂದರಾವ್ ಎನ್ನುವವರು ಇದ್ದಾರೆ ಎಂದು ಹೇಳುತ್ತಿದ್ದರು ಅವರನ್ನು ನಾನು ನೋಡಿರಲಿಲ್ಲ. ಹಲವಾರು ದಶಕಗಳ ನಂತರ, ಈಗ ಒಂದೆರಡು ವರ್ಷಗಳ ಹಿಂದೆ ಫೇಸ ಬುಕ್ ಮೂಲಕ ಪರಿಚಿತರಾದ ಪ್ರಭಾಕರರಾವ್ ಅವರು ಗೋವಿಂದರಾವ್ ಅವರ ಮಗ ಎಂದು ತಿಳಿದು ರೋಮಾಂಚಿತಗೊಂಡೆ. ಅವರನ್ನು ಗಮನಿಸುತ್ತಾ ಬಂದೆ. ಹೃದಯವಂತರು. ಕವಿ ಮನಸ್ಸಿನ ಸಹೃದಯರು ಎಂಬುದನ್ನು ಅರಿತುಕೊಂಡೆ. ಪರಸ್ಪರ ಭೇಟಿಯೂ ಆಗದಿರುವ ನನ್ನ ಬಗ್ಗೆ ಅವರಿಗೆ ಅಪಾರ ಪ್ರೀತಿ. ನಾಲ್ಕೈದು ತಲೆಮಾರಿನ ಹಿಂದೆ ಒಂದೇ ಕುಟುಂಬದಿಂದ ಬಂದವರು ನಾವು. ನನ್ನ ಬಗ್ಗೆ ಕವನವೊಂದನ್ನು ಬರೆದು ತಮ್ಮ ಫೇಸ್ ಬುಕ್ ಗೋಡೆಯ ಮೇಲೆ ಹಾಕಿದ್ದಾರೆ. ಕವನದಲ್ಲಿ ನನ್ನ ಬಗ್ಗೆ ಬರೆದಿದ್ದಾರೆಂಬುದೇ ಮುಖ್ಯವಲ್ಲ. ಪ್ರತಿ ಸಾಲಿನ ಎರಡನೆಯ ಅಕ್ಷರವನ್ನು ಸೇರಿಸಿದರೆ ಅಬ್ಬಣಿ ನಾರಾಯಣರಾವು ಪ್ರಹ್ಲಾದರಾಯ ಎಂದು ಮೂಡಿ ಬರುತ್ತದೆ. ಪ್ರಭಾಕರರಾಯರೇ ನಿಮಗೆ ನಾನು ಕೃತಜ್ಞ, ಕೋಟಿ ನಮನ
ಅಭಿನಂದನೆ-ಅನಾಪ್ರ
************
ಹೂ ಅರಳಿ ಸೂಸಿದೆ ಸುಗಂಧ
ಹಬ್ಬ ಹುಣ್ಣಿಮೆ ಸೊಗಸು ಬರಹ
ಗಣಿ ಯಿಂದಪುಟಿದ ಪದಬಂಧ
ಬಾನಾಡಿಯಂತೆ ನಾಡೆಲ್ಲಾ ವಾರ್ತೆ
ಧಾರಾವಾಹಿ ವರನಟನ ಚರಿತೆ
ಪಯಣ ಸಾಗಿದೆ ದೂರ ಗಗನವೇ ಮೇರೆ
ಕಣಕಣದಲ್ಲೂ ಕನ್ನಡದ ಒಲುಮೆ
ಸಾರಾಮೃತ ರಸಸಿಂಧುಚಿಂತನೆ
ನೋವುನಲಿವುಗಳ ಹೂಗೊಂಚಲು
ಸುಪ್ರಸಿದ್ಧ ರ ಜೀವನಗಾಥೆ
ಆಹ್ಲಾದನೋಟ ಕೋಲಾರ ಸೆಲೆ
ಹೃದಯ ಪೂರ್ವ ಕ ಅಭಿಮಾನ
ಕರಾರ್ಚಿತೆ ಶ್ರೀ ಶಾರದೆಯಪುತ್ರರೇ
ದಯಮಾಡಿ ಸ್ವೀಕರಿಸಿ ಶುಭವಂದನೆ,
#ಪ್ರಭಾಕರ ತಾರಾತನಯ
3/11/2019
https://m.facebook.com/story.php?story_fbid=530342767748980&id=100023197837209&sfnsn=scwspwa&funlid=Rh5eBozFsQYwP7Rg
************
ಹೂ ಅರಳಿ ಸೂಸಿದೆ ಸುಗಂಧ
ಹಬ್ಬ ಹುಣ್ಣಿಮೆ ಸೊಗಸು ಬರಹ
ಗಣಿ ಯಿಂದಪುಟಿದ ಪದಬಂಧ
ಬಾನಾಡಿಯಂತೆ ನಾಡೆಲ್ಲಾ ವಾರ್ತೆ
ಧಾರಾವಾಹಿ ವರನಟನ ಚರಿತೆ
ಪಯಣ ಸಾಗಿದೆ ದೂರ ಗಗನವೇ ಮೇರೆ
ಕಣಕಣದಲ್ಲೂ ಕನ್ನಡದ ಒಲುಮೆ
ಸಾರಾಮೃತ ರಸಸಿಂಧುಚಿಂತನೆ
ನೋವುನಲಿವುಗಳ ಹೂಗೊಂಚಲು
ಸುಪ್ರಸಿದ್ಧ ರ ಜೀವನಗಾಥೆ
ಆಹ್ಲಾದನೋಟ ಕೋಲಾರ ಸೆಲೆ
ಹೃದಯ ಪೂರ್ವ ಕ ಅಭಿಮಾನ
ಕರಾರ್ಚಿತೆ ಶ್ರೀ ಶಾರದೆಯಪುತ್ರರೇ
ದಯಮಾಡಿ ಸ್ವೀಕರಿಸಿ ಶುಭವಂದನೆ,
#ಪ್ರಭಾಕರ ತಾರಾತನಯ
3/11/2019
https://m.facebook.com/story.php?story_fbid=530342767748980&id=100023197837209&sfnsn=scwspwa&funlid=Rh5eBozFsQYwP7Rg
ಸ್ಕೂಲ್ಮಾಸ್ಟರ್ ಚಿತ್ರಕ್ಕೆ ಡಿವಿಜಿ ಪ್ರೇರಣೆ
ಅ.ನಾ.ಪ್ರಹ್ಲಾದರಾವ್
ಕನ್ನಡದ ಹಿರಿಯ ಲೇಖಕ ಡಿವಿಜಿಯವರ ಸಲಹೆಯಿಂದಾಗಿ ಕನ್ನಡದಲ್ಲಿ ಒಂದು ಅತ್ಯುತ್ತಮ ಚಲಚಿತ್ರ ವಿಕಸನಗೊಳ್ಳಲು ಕಾರಣವಾಯಿತು. ಅರವತ್ತು ವರ್ಷಗಳ ಹಿಂದೆ ಬಿಡುಗಡೆಗೊಂಡ ಕನ್ನಡದ ಮಹೋನ್ನತ ಚಲನಚಿತ್ರ ಸ್ಕೂಲ್ಮಾಸ್ಟರ್ ರೂಪುಗೊಂಡಿದ್ದರ ಹಿಂದೆ ಒಂದು ಸ್ವಾರಸ್ಯ ಕಥೆಯಿದೆ. 1934ರಲ್ಲಿ ಕನ್ನಡದ ಮೊದಲ ಚಿತ್ರ `ಸತಿ ಸುಲೋಚನ` ಬಿಡುಗಡೆಯಾದ ನೆನಪಿನಲ್ಲಿ 1958ರಲ್ಲಿ ಕನ್ನಡ ಚಿತ್ರರಂಗದ ರಜತ ಮಹೋತ್ಸವ ಬೆಂಗಳೂರಿನಲ್ಲಿ ನಡೆಯಿತು. 25 ವರ್ಷಗಳ ಅಂತರದಲ್ಲಿ ಕನ್ನಡದಲ್ಲಿ ಕೇವಲ 90 ಚಿತ್ರಗಳು ತಯಾರಾಗಿದ್ದವು.. ಬೆಂಗಳೂರಿನ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಚಲನಚಿತ್ರ ಕ್ಷೇತ್ರದ ಬಹುಪಾಲು ಗಣ್ಯರು ಪಾಲ್ಗೊಂಡಿದ್ದರು. ಕನ್ನಡದ ಪ್ರಖ್ಯಾತ ಲೇಖಕರಾದ ಡಿ.ವಿ.ಗುಂಡಪ್ಪನವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ``ಕನ್ನಡ ಚಿತ್ರರಂಗದ ಈ ಬೆಳ್ಳಿಹಬ್ಬ ಅರ್ಥಪೂರ್ಣವಾಗಬೇಕಾದರೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬಲ್ಲಂತಹ ಅತ್ಯುತ್ತಮ ಕನ್ನಡ ಚಿತ್ರವೊಂದನ್ನು ರೂಪಿಸಲು ಕನ್ನಡ ಚಲನಚಿತ್ರ ನಿರ್ಮಾಪಕರು ಮುಂದಾಗಬೇಕು, ಕೇವಲ ಕಾರ್ಯಕ್ರಮದ ಆಚರಣೆಯಿಂದ ರಜತ ಮಹೋತ್ಸವ ಸಾರ್ಥಕ್ಯವನ್ನು ಪಡೆಯಲಾರದು`` ಎಂದು ಈ ಸಂದರ್ಭದಲ್ಲಿ ಡಿವಿಜಿ ಹೇಳಿದರು. ಮಾತನ್ನು ಮುಂದುವರೆಸಿದ ಡಿವಿಜಿಯವರು ``ನಿರ್ಮಾತೃ ಪಂತಲು ಇಲ್ಲಿದ್ದಾರೆ, ಅವರು ಈ ಬಗ್ಗೆ ಯೋಚಿಸಲಿ`` ಎಂದರು.
ಅ.ನಾ.ಪ್ರಹ್ಲಾದರಾವ್
ಕನ್ನಡದ ಹಿರಿಯ ಲೇಖಕ ಡಿವಿಜಿಯವರ ಸಲಹೆಯಿಂದಾಗಿ ಕನ್ನಡದಲ್ಲಿ ಒಂದು ಅತ್ಯುತ್ತಮ ಚಲಚಿತ್ರ ವಿಕಸನಗೊಳ್ಳಲು ಕಾರಣವಾಯಿತು. ಅರವತ್ತು ವರ್ಷಗಳ ಹಿಂದೆ ಬಿಡುಗಡೆಗೊಂಡ ಕನ್ನಡದ ಮಹೋನ್ನತ ಚಲನಚಿತ್ರ ಸ್ಕೂಲ್ಮಾಸ್ಟರ್ ರೂಪುಗೊಂಡಿದ್ದರ ಹಿಂದೆ ಒಂದು ಸ್ವಾರಸ್ಯ ಕಥೆಯಿದೆ. 1934ರಲ್ಲಿ ಕನ್ನಡದ ಮೊದಲ ಚಿತ್ರ `ಸತಿ ಸುಲೋಚನ` ಬಿಡುಗಡೆಯಾದ ನೆನಪಿನಲ್ಲಿ 1958ರಲ್ಲಿ ಕನ್ನಡ ಚಿತ್ರರಂಗದ ರಜತ ಮಹೋತ್ಸವ ಬೆಂಗಳೂರಿನಲ್ಲಿ ನಡೆಯಿತು. 25 ವರ್ಷಗಳ ಅಂತರದಲ್ಲಿ ಕನ್ನಡದಲ್ಲಿ ಕೇವಲ 90 ಚಿತ್ರಗಳು ತಯಾರಾಗಿದ್ದವು.. ಬೆಂಗಳೂರಿನ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ಕನ್ನಡ ಚಲನಚಿತ್ರ ಕ್ಷೇತ್ರದ ಬಹುಪಾಲು ಗಣ್ಯರು ಪಾಲ್ಗೊಂಡಿದ್ದರು. ಕನ್ನಡದ ಪ್ರಖ್ಯಾತ ಲೇಖಕರಾದ ಡಿ.ವಿ.ಗುಂಡಪ್ಪನವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ``ಕನ್ನಡ ಚಿತ್ರರಂಗದ ಈ ಬೆಳ್ಳಿಹಬ್ಬ ಅರ್ಥಪೂರ್ಣವಾಗಬೇಕಾದರೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಬಲ್ಲಂತಹ ಅತ್ಯುತ್ತಮ ಕನ್ನಡ ಚಿತ್ರವೊಂದನ್ನು ರೂಪಿಸಲು ಕನ್ನಡ ಚಲನಚಿತ್ರ ನಿರ್ಮಾಪಕರು ಮುಂದಾಗಬೇಕು, ಕೇವಲ ಕಾರ್ಯಕ್ರಮದ ಆಚರಣೆಯಿಂದ ರಜತ ಮಹೋತ್ಸವ ಸಾರ್ಥಕ್ಯವನ್ನು ಪಡೆಯಲಾರದು`` ಎಂದು ಈ ಸಂದರ್ಭದಲ್ಲಿ ಡಿವಿಜಿ ಹೇಳಿದರು. ಮಾತನ್ನು ಮುಂದುವರೆಸಿದ ಡಿವಿಜಿಯವರು ``ನಿರ್ಮಾತೃ ಪಂತಲು ಇಲ್ಲಿದ್ದಾರೆ, ಅವರು ಈ ಬಗ್ಗೆ ಯೋಚಿಸಲಿ`` ಎಂದರು.
ಡಿವಿಜಿಯವರ ಈ ಕರೆ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಿ.ಆರ್.ಪಂತುಲು ಅವರಲ್ಲಿ ಸಂಚಲನ ಮೂಡಿಸಿತು. `ಹೌದು, ಕನ್ನಡದಲ್ಲಿ ಅಂತಹ ಚಿತ್ರ ಏಕೆ ಮಾಡಬಾರದು` ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡರು. ಈ ಯೋಚನೆ ಪಂತಲು ಅವರ ತಲೆ ಹೊಕ್ಕ ನಂತರ ಕೂತಲ್ಲಿ, ನಿಂತಲ್ಲಿ ಅದೇ ವಿಷಯ ಕಾಡಲಾರಂಭಿಸಿತು. ಯಾವ ಕಥೆ, ಯಾವ ಚಿತ್ರ, ಹೇಗಿರಬೇಕು ಎಂಬ ನೂರಾರು ಆಲೋಚನೆಗಳು ಅವರಲ್ಲಿ ಸುಳಿದು ಹೋದವು. ಹತ್ತಾರು ಕಥೆಗಳು ಅವರ ಮನಃಪಟಲದಲ್ಲಿ ಹಾದು ಹೋದವು. ಶಿಕ್ಷಕರಾಗಿಯೇ ತಮ್ಮ ವೃತ್ತಿ ಜೀವನ ಆರಂಭಿಸಿ, ಆ ಮೂಲಕವೇ ಪಂತುಲು ಎಂಬ ಅಭಿದಾನಕ್ಕೆ ಪಾತ್ರವಾಗಿದ್ದ ಅವರ ಮನದಲ್ಲಿ ಶಿಕ್ಷಕ ಪಾತ್ರಗಳೇ ಹೆಚ್ಚು ಕಾಡÀಲಾರಂಭಿಸಿತು. ಉತ್ತಮ ಶಿಕ್ಷಕನೊಬ್ಬನ ಬದುಕನ್ನು ಆಧರಿಸಿದ ಕಥೆಯೇ ತಮ್ಮ ಚಲನಚಿತ್ರವಾಗಬೇಕೆಂದು ಅವರ ಮನಸ್ಸು ಹೇಳಿತು. ಒಂದು ಮಹಾನ್ ಚಿತ್ರವನ್ನು ರಜತಪರದೆಗೆ ತರುವ ನಿಶ್ಚಯ ಬೆಂಗಳೂರಿನಲ್ಲಿ ನಡೆದ ಕನ್ನಡ ಚಲನಚಿತ್ರರಂಗದ ರಜತ ಮಹೋತ್ಸವ ಸಂದರ್ಭದಲ್ಲಿ ಪಂತುಲು ಅವರಲ್ಲಿ ಆವಿರ್ಭವಿಸಿತು. ಹಾಗೇ ಮೂಡಿ ಬಂದ `ಸ್ಕೂಲ್ಮಾಸ್ಟರ್` ಚಿತ್ರ ಕನ್ನಡಿಗರ ಹೃನ್ಮನಗಳನ್ನು ತುಂಬಿಕೊಂಡಿತಲ್ಲದೆ ಭಾರತದ ಹಲವಾರು ಭಾಷೆಗಳಲ್ಲಿ ಈ ಚಿತ್ರ ತಯಾರಾಗಿ ಬಿಡುಗಡೆಗೊಂಡು, ಪ್ರೇಕ್ಷಕರ ಕಣ್ಣುಗಳನ್ನು ತೇವ ಮಾಡಿತು.
ಪಂತುಲು ಕಲಾ ಕ್ಷೇತ್ರಕ್ಕೆ ತಮ್ಮ ಇಡೀ ಜೀವನವನ್ನು ಧಾರೆಯೆರೆದುಕೊಂಡಿದ್ದರು. ಭಾರತೀಯ ಭಾಷೆಗಳ ಉತ್ತಮ ಕಥೆಗಳನ್ನು ತರಿಸುವುದು, ಅವುಗಳನ್ನು ಓದುವುದು ಅಥವ ಓದಿಸಿ ಕೇಳುವುದು ಅವರ ಅಭ್ಯಾಸವಾಗಿತ್ತು. ಶಿಕ್ಷಕನೊಬ್ಬನ ಕಥೆ ಬೇಕೆಂದು ಅವರು ತವಕಿಸಿದಾಗ ಅಂತಹ ಒಂದು ಕಥೆ ಅವರಿಗೆ ಲಭ್ಯವಾಯಿತು. ಮರಾಠಿ ಭಾಷೆಯಲ್ಲಿ ಶಿರವಾಡ್ಕರ್ ಅವರು ಬರೆದಿದ್ದ `ವೈಷ್ಣವಿ` ಕಥೆ ಬಹುಪಾಲು ಪಂತುಲು ಅವರ ಮನಸ್ಸಿನಲ್ಲಿನ ಲೆಕ್ಕಾಚಾರಗಳನ್ನು ಪರಿಹರಿಸುವಂತಹ ಕಥೆಯಾಗಿತ್ತು. ಕುಸುಮಾಗ್ರಾಜ್ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾಗಿದ್ದ ಖ್ಯಾತ ಮರಾಠಿ ಲೇಖಕ ಶಿರವಾಡ್ಕರ್ ಬರೆದ ಮೊದಲ ಕಾದಂಬರಿ `ವೈಷ್ಣವಿ` ಆಗಿತ್ತು. ತಮ್ಮ ಕಾವ್ಯ, ನಾಟಕ, ಕಥೆ, ಕಾದಂಬರಿ ಹಾಗೂ ಚಿಂತನೆಗಳಿಂದ ಶಿರವಾಡ್ಕರ್ ಹೆಸರು ಮಹಾರಾಷ್ಟ್ರದಲ್ಲಿ ಇಂದಿಗೂ ಅಮರವಾಗಿ ಉಳಿದಿದೆ. ಡಿ.ವಿ.ಜಿಯವರ ಆಶಯದಂತೆ ಪಂತುಲು ಅವರು `ಸ್ಕೂಲ್ ಮಾಸ್ಟರ್` ಚಿತ್ರವನ್ನು ಸಿದ್ಧಪಡಿಸಿ, ಕನ್ನಡ ಚಿತ್ರರಂಗದ ರಜತ ವರ್ಷದಲ್ಲೇ ಬಿಡುಗಡೆ ಮಾಡಿದ್ದು ಒಂದು ವಿಶೇಷವಾಯಿತು.
ಪಂತುಲು ಅವರಲ್ಲಿ ಅಡಗಿದ್ದ ಕಲಾ ಪ್ರತಿಭೆ `ಸ್ಕೂಲ್ ಮಾಸ್ಟರ್` ಮೂಲಕ ಅನಾವರಣಗೊಂಡಿತು. ಅಭಿನಯ ಹಾಗೂ ನಿರ್ದೇಶನ ಈ ಎರಡೂ ಕ್ಷೇತ್ರಗಳಲ್ಲಿ ಅವರಿಗಿದ್ದ ಪ್ರೌಢಿಮೆ ಈ ಚಿತ್ರದಲ್ಲಿ ಅಭಿವ್ಯಕ್ತಿಗೊಂಡಿತು. ಬಹಳ ಮುಖ್ಯವಾಗಿ ಅತಿಥಿ ನಟನಾಗಿ ಅಭಿನಯಿಸಿದರೂ ಜನಮಾನಸದಲ್ಲಿ ತನ್ನ ವ್ಯಕ್ತಿತ್ವವನ್ನು ಹಿಡಿದಿರಿಸಿದ ಸಬ್ ಇನ್ಸಪೆಕ್ಟರ್ ಪಾತ್ರದಲ್ಲಿ ತಮಿಳು ನಟ ಶಿವಾಜಿ ಗಣೇಶನ್ ಜನ ಮನ ಗೆದ್ದರು. ಈ ಚಿತ್ರ ಬೆಂಗಳೂರಿನಲ್ಲಿ ಸಂಯೋಜಿತವಾಗಿ 56 ವಾರಗಳು ಪ್ರದರ್ಶನಗೊಂಡು, ಒಂದು ವರ್ಷ ಸತತವಾಗಿ ಪ್ರದರ್ಶನಗೊಂಡ ಪ್ರಥಮ ಕನ್ನಡ ಚಿತ್ರವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಈ ಚಿತ್ರದ ರಜತಮಹೋತ್ಸವ ಸಮಾರಂಭವನ್ನು ಬೆಂಗಳೂರಿನ ಮೆಜಿಸ್ಟಿಕ್ ಪ್ರದೇಶದಲ್ಲಿದ್ದ ಗೀತಾ ಚಿತ್ರಮಂದಿರದಲ್ಲಿ ಏರ್ಪಡಿಸಲಾಗಿತ್ತು. ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದ ಎಸ್.ನಿಜಲಿಂಗಪ್ಪನವರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಸಂಪುಟದಲ್ಲಿ ಪ್ರಮುಖ ಖಾತೆ ವಹಿಸಿಕೊಂಡಿದ್ದ ಬಿ.ಡಿ.ಜತ್ತಿ ಅವರು ಪಂತುಲು ಅವರಿಗೆ ಹೂಗುಚ್ಚ ನೀಡಿ ಅಭಿನಂದಿಸಿದರು. ಕೇಂದ್ರ ಸರ್ಕಾರ 1958ರ ರಾಷ್ಟ್ರೀಯ ಪ್ರಶಸ್ತಿಗಳಲ್ಲಿ `ಸ್ಕೂಲ್ಮಾಸ್ಟರ್` ಚಿತ್ರವನ್ನು ಅಖಿಲ ಭಾರತ ಮಟ್ಟದಲ್ಲಿ ಮೂರನೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂದು ಪರಿಗಣಿಸಿ ರಾಷ್ಟ್ರಪತಿಗಳ ಬೆಳ್ಳಿಪದಕ ಹಾಗೂ ಪ್ರಶಸ್ತಿಪತ್ರ ನೀಡಿ ಗೌರವಿಸಿತು. 1958ರ ಏಪ್ರಿಲ್ 28ರಂದು ನವದೆಹಲಿಯ ವಿಜ್ಞಾನಭವನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಂತುಲು ಭಾಗವಹಿಸಿ ಬಹಳ ವಿನೀತ ಭಾವದಿಂದ ಭಾರತದ ಪ್ರಥಮ ರಾಷ್ಟ್ರಪತಿಗಳಾಗಿದ್ದ ಬಾಬು ರಾಜೇಂದ್ರಪ್ರಸಾದ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. ಈ ಅಪೂರ್ವ ಸಮಾರಂಭದಲ್ಲಿ ನಿಂತು ಪ್ರಶಸ್ತಿ ನೀಡುತ್ತಿದ್ದ ರಾಷ್ಟ್ರಪತಿಗಳ ಪಕ್ಕದಲ್ಲಿ ಭಾರತದ ಪ್ರಥಮ ಪ್ರಧಾನಮಂತ್ರಿಗಳಾಗಿದ್ದ ಪಂಡಿತ್ ಜವಹರಲಾಲ್ ನೆಹರು ಆಸೀನರಾಗಿದ್ದರು. ಪಂತುಲು ಪ್ರಶಸ್ತಿ ಪಡೆಯುವಾಗ ಅವರ ಸೌಜನ್ಯವನ್ನು ಕಂಡ ನೆಹರು ಕುಳಿತ ಕಡೆಯಿಂದಲೇ ಎರಡೂ ಕೈ ಮುಗಿದು ತಮ್ಮ ಕೃತಜ್ಞತೆಗಳನ್ನು ಅರ್ಪಿಸಿದರು.
`ಸ್ಕೂಲ್ಮಾಸ್ಟರ್` ಚಿತ್ರ ಬಿಡುಗಡೆ ಆಗುವ ವೇಳೆಗಾಗಲೇ ಶಾಲೆಗಳಲ್ಲಿ ಪ್ರಾರ್ಥನಾ ಗೀತೆಯಾಗಿ ಪ್ರಖ್ಯಾತವಾಗಿದ್ದ ಸೊಸಲೆ ಅಯ್ಯಾಶಾಸ್ತ್ರಿಗಳು ರಚಿಸಿದ `ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ` ಗೀತೆಯನ್ನು ಪಂತುಲು ತಮ್ಮ ಸ್ಕೂಲ್ಮಾಸ್ಟರ್ ಚಿತ್ರದಲ್ಲಿ ಶಾಲಾ ಪ್ರಾರ್ಥನಾ ಗೀತೆಯನ್ನಾಗಿಯೇ ಬಳಸಿಕೊಂಡರು. ಹತ್ತೊಂಬತ್ತನೆ ಶತಮಾನದ ಆರಂಭದಿಂದ ಹಲವಾರು ದಶಕಗಳ ಕಾಲ ಮೈಸೂರು ರಾಜ್ಯದ ಬಹುಪಾಲು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಪ್ರಾರ್ಥನಾಗೀತೆಯಾಗಿದ್ದ `ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ` ಗೀತೆಯನ್ನು ಸೋಸಲೆ ಅಯ್ಯಾಶಾಸ್ತ್ರಿಗಳು (20.03.1854-17.05.1934) ರಚಿಸಿದರು. ಅಂದಿನ ದಿನಗಳಲ್ಲಿ ಮಗ್ಗಿಪುಸ್ತಕ ಎಂಬ ಹೆಸರಿನಲ್ಲಿ ಪ್ರಕಟಗೊಳ್ಳುತ್ತಿದ್ದ ಮಕ್ಕಳ ಉಪಯುಕ್ತ ಗಣಕ ಕೋಷ್ಠಕದಲ್ಲಿಯೂ ಪ್ರಾರ್ಥನಾಗೀತೆ ಎಂಬ ಹೆಸರಿನಲ್ಲಿಯೇ ಸ್ವಾಮಿದೇವನೆ ಹಾಡನ್ನು ಪ್ರಕಟಿಸಲಾಗುತ್ತಿತ್ತು. ತಿರಮಕೂಡಲು ನರಸೀಪುರದ ಬಳಿ ಇರುವ ಸೋಸಲೆಯಲ್ಲಿ ಜನಿಸಿದ ಅಯ್ಯಾಶಾಸ್ತ್ರಿಗಳು ಮೈಸೂರಿನ ಸದ್ವಿದ್ಯಾಶಾಲೆಯಲ್ಲಿ ಉಪಾಧ್ಯಾಯ ವೃತ್ತಿ ಮಾಡಿದರು. ಜಗನ್ಮೋಹನ ಮುದ್ರಾಕ್ಷರ ಶಾಲೆಯಲ್ಲಿ ಸಂಸ್ಕøತ ಗ್ರಂಥ ಪರಿಶೋಧನ ಕಾರ್ಯವನ್ನೂ ಮಾಡಿದರು. ಮೈಸೂರು ಅರಮನೆಯಲ್ಲಿ ರಾಜಗುರುಗಳ ಪಟ್ಟ ಇವರಿಗೆ ದೊರೆತಿತ್ತು. ಮೈಸೂರಿನಲ್ಲಿ ವೃತ್ತಿ ರಂಗಭೂಮಿ ತಂಡ ಕಟ್ಟಿ ಅದನ್ನು ಮುನ್ನಡೆಸಿದರು. ಹಲವಾರು ಗ್ರಂಥಗಳನ್ನು ರಚಿಸಿ ಪ್ರಕಟಪಡಿಸಿದರು. ಮಹಾರಾಜರಿಂದ ಮಹಾವಿದ್ವಾನ್, ಕವಿತಿಲಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅಯ್ಯಾಶಾಸ್ತ್ರಿಗಳ ಪುತ್ರ ಎಸ್.ಜಿ.ಸ್ವಾಮಿ (ನಿಧನ: 22 ಸೆಪ್ಟೆಂಬರ್ 1955) ಈಗ ಪ್ರಖ್ಯಾತಗೊಂಡಿರುವ ಮೈಸೂರು ಗಂಧದ ಸಾಬೂನು ಆವಿಷ್ಕರಿಸಿ ಹಲವು ವರ್ಷಗಳ ಕಾಲ ಸಾಬೂನು ಕಾರ್ಖಾನೆಯನ್ನು ನಡೆಸಿದರು. ಬೆಂಗಳೂರಿನ ಲಾಲ್ಬಾಗ್ ಬಳಿಯಿದ್ದ ಎಸ್.ಜಿ.ಸ್ವಾಮಿ ಅವರ ನಿವಾಸ ಡಿವಿಜಿ, ಮಾಸ್ತಿ ಮುಂತಾದ ಸಾಹಿತಿಗಳು ಆಗಾಗ ಸೇರುತ್ತಿದ್ದ ಸಾಹಿತ್ಯ ಕೇಂದ್ರವಾಗಿ ಪರಿಣಮಿಸಿತ್ತು. `ಸ್ವಾಮಿ ದೇವನೆ ಲೋಕಪಾಲನೆ ತೇ ನಮೋಸ್ತು ನಮೋಸ್ತುತೆ` ಹಾಡನ್ನು ಉಲ್ಲೇಖಿಸಿ ಬಹಳಷ್ಟು ಕಡೆ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಂದ ರಚಿತವಾಗಿದೆ ಎಂದು ದಾಖಲಿಸಿರುವುದು ಸರಿಯಲ್ಲ. ಸೋಸಲೆ ಅಯ್ಯಾಶಾಸ್ತ್ರಿಗಳು ರಚಿಸಿದ ಸ್ವಾಮಿ ದೇವನೆ ಲೋಕಪಾಲನೆ ಪ್ರಾರ್ಥನಾ ಗೀತೆ ತಲಾ ನಾಲ್ಕು ಸಾಲುಗಳ ಎಂಟು ಚರಣಗಳನ್ನು ಹೊಂದಿದೆ.
ಭಾರತಕ್ಕೆ ಭೇಟಿ ನೀಡಿರುವ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ತಾಜಮಹಲ್ ನೋಡಿ ಆ ಬಗ್ಗೆ ಒಂದು ಕಾಮೆಂಟ್ ಮಾಡಿದರು. ಅಮೆರಕದಲ್ಲಿ ಒಂದು ಕ್ಯಾಸಿನೊಗೆ ತಾಜಮಹಲ್ ಹೆಸರು ಇಟ್ಟಿದ್ದಾರೆ, ನಾನು ಅದನ್ನು ನೊಡಿದ್ದೇನೆ, ಅದನ್ನು ತಾಜಮಹಲ್ ವಿನ್ಯಾಸದಲ್ಲೇ ನಿರ್ಮಿಸಲಾಗಿದೆ ಎಂದು ಹೇಳಿದರು. ನನಗೆ ಸಡನ್ ಆಗಿ ನೆನಪಾಯಿತು. 2008ರಲ್ಲಿ ನಾನು ನನ್ನ ಶ್ರೀಮತಿ ಮಲ್ಲಿಕಾ ಅಮೆರಿಕಗೆ ಹೋಗಿದ್ದಾಗ ಗೆಳೆಯರಾದ ರಾಜ್ ಶಶಿ ಒಂದು ರಾತ್ರಿ ನ್ಯೂಜರ್ಸಿ ಇಂದ 319 ಮೈಲಿ ದೂರದ ಅಟ್ಲಾಂಟಿಕ್ ಸಿಟಿ (ಅಟ್ಲಾಂಟ ಸಿಟಿ ಅಲ್ಲ) ಎಂಬ ಸಮುದ್ರ ದಂಡೆಯ ಪಟ್ಟಣಕ್ಕೆ ಕಾರಿನಲ್ಲಿ ಕರೆದೊಯ್ದರು. ಈ ತಾಜಮಹಲ್ ಕ್ಯಾಸಿನೊ ರೆಸಾರ್ಟ್ ತಾಜಮಹಲ್ ಆಕಾರದಲ್ಲಿದೆ, ಇಂದು ನೆನಪಾಗಿ ಫೋಟೊ ನೋಡಿದರೆ ಅದು ‘ಟ್ರಂಪ್ ತಾಜಮಹಲ್’ ಎಂಬ ಹೆಸರು ನೋಡಿ ಅಚ್ಚರಿಯಾಯಿತು. ನಾನು ಟ್ರಂಪ್ ಮಾಲೀಕತ್ವದ ಕ್ಯಾಸಿನೊಗೆ ಹೋಗಿದ್ದೆ ಎಂಬ ಕಲ್ಪನೆಯೂ ಇರಲಿಲ್ಲ. ಅಲ್ಲಿ ಭಾರತೀಯ ಶೈಲಿಯ ಊಟ ಮಾಡಿದೆವು. ಸುತ್ತಾಡಿದೆವು, ಕ್ಯಾಸಿನೊಗೆ ಹೋಗಿ ಒಂದಷ್ಟು ಡಾಲರ್ಸ್ ಕಳೆದುಕೊಂಡು ಜೂಜೂ ಆಡಿದೆವು. ಸ್ವಲ್ಪ ಬಂದರೂ ನಷ್ಟವಾಯಿತು. ಈ ಕ್ಯಾಸಿನೋ ಗೋಡೆ ಮೇಲೆ ಭಾರತೀಯ ಶೈಲಿಯ ಸುಂದರ ತೈಲಚಿತ್ರವೊಂದನ್ನು ಅಳವಡಿಸಿರುವುದನ್ನೂ ಸೆರೆ ಹಿಡಿದೆವು. ಹಳೆಯ ಫೋಟೋ ನೋಡಿ ಅಮೆರಿಕ ಅಧ್ಯಕ್ಷರ ಕ್ಯಾಸಿನೊಗೆ ಹೋಗಿದ್ದ ಹೊಸ ವಿಷಯವೊಂದರ ಅರಿವಾಯಿತು. ಆ ಮೇಲೆ (2013) ನಮ್ಮ ತಾಜ್ ಮಹಲ್ ನೋಡಿ ಬಂದೆವು
ವಿಕಿಪಿಡಿಯಾ ಹೀಗೆ ಹೇಳುತ್ತದೆ: Trump Plaza is a closed hotel and casino on the Boardwalk in Atlantic City, New Jersey, owned by Trump Entertainment Resorts. Designed by architect Martin Stern Jr.The Trump Organization, a company owned by real estate developer Donald Trump, began construction of the casino in June 1982.[3] Harrah's, the gaming unit of Holiday Inns, joined as a partner a month later.[4] Trump would oversee the construction, while Harrah's would operate the property, referred to as Harrah's Boardwalk, after opening.[3]
ವಿಜಯೇಂದ್ರ ನಿನಗೆ ಅಂತಿಮ ನಮನ
ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ವಿಜಯೇಂದ್ರ ಜನ್ಮಸ್ಥಳ. ನನ್ನ ಸಂಬಂಧಿಯೂ ಅದ ವಿಜಯೇಂದ್ರ 1972ರಲ್ಲಿ ನಾನು ಕಾಲೇಜು ವ್ಯಾಸಂಗ ಮಾಡುತ್ತಿದ್ದ ದಿನಗಳಿಂದ ಪರಿಚಯ. 1975ರಲ್ಲಿ ನಾನು ಕೋಲಾರಪತ್ರಿಕೆ ವರದಿಗಾರನಾಗಿ ಸೇರಿದಾಗ, ಆಗಿಂದಾಗ್ಗೆ ಬರುತ್ತಿದ್ದ. ಕೋಲಾರದಲ್ಲಿಯೇ ಪಿಯೂಸಿ ವ್ಯಾಸಂಗವನ್ನು ಮಾಡುತ್ತಿದ್ದ. ಪ್ರಗತಿಪರರ ಗುಂಪಿನಲ್ಲಿ ಕಾಣಿಸಿಕೊಂಡಿದ್ದ ವಿಜಯೇಂದ್ರ ಆ ವೇಳೆಗೆ ಅವಿನ್ಯುರಸ್ತೆಯ ಅರಳಿಮರದ ಕೆಳಗೆ ಒಂದು ಟೈಪರೇಟರ್ ಇರಿಸಿಕೊಂಡು ಜಾಬ್ ಟೈಪಿಂಗ್ ಮಾಡುತ್ತಿದ್ದ. 1979ರಲ್ಲಿ ನಾನು ಕೋಲಾರದಲ್ಲಿ ಹೊನ್ನುಡಿ ಪತ್ರಿಕೆ ಆರಂಭಿಸುವ ವೇಳೆಗೆ ಮದುವೆ ಮಾಡಿಕೊಂಡು ಒಬ್ಬ ಮಗನ ತಂದೆಯಾಗಿದ್ದ. ಹೊನ್ನುಡಿ ಕಚೇರಿ ಮುಂಭಾದಲ್ಲಿಯೇ ಅವರ ಅಕ್ಕ ಶ್ರೀಮತಿ ಜಯಮ್ಮನವರ ಮನೆ (ಅವರ ಭಾವ ಹೊಟೆಲ್ ಒಂದನ್ನು ಇರಿಸಿಕೊಂಡಿದ್ದರು). ಕೋಲಾರಕ್ಕೆ ಆಗಿಂದಾಗ್ಗೆ ಅಕ್ಕನ ಮನೆಗೆ ಬರುತ್ತಿದ್ದ ವಿಜಯೇಂದ್ರ ಹೊನ್ನುಡಿ ಆಫೀಸಿಗೆ ಬಂದು ಕೂಡುತ್ತಿದ್ದ. ಒಂದು ದಿನ ಪ್ರಗತಿಪರ ಧೋರಣೆಯನ್ನು ಹೊಂದಿದ್ದ ಮಾಸಪತ್ರಿಕೆಯೊಂದನ್ನು (ಹೆಸರು ಮರೆತಿದೆ) ಆರಂಭಿಸುವ ತನ್ನ ಬಯಕೆಯನ್ನು ಹೇಳಿದ. ನಾವು ಕೋಲಾರದ ಗೆಳೆಯರು ಸೇರಿ ಬಹಳಷ್ಟು ಜನರ ವಾರ್ಷಿಕ ಚಂದಾ ಸಂಗ್ರಹಿಸಿಕೊಟ್ಟಿದ್ದೆವು. ಪತ್ರಿಕೆ ಆರಂಭಿಸಿ ಒಂದಷ್ಟು ತಿಂಗಳು ಪತ್ರಿಕೆ ಕಳುಹಿಸುತ್ತಿದ್ದ. ಬಹಳ ಜಾಣ ಹಾಗೂ ಬುದ್ಧಿವಂತನಾದ ವಿಜಯೇಂದ್ರ ಡೆಕ್ಕನ್ ಕ್ರಾನಿಕಲ್ ಇಂಗ್ಲಿಷ್ ದಿನಪತ್ರಿಕೆಯ ಮುಖ್ಯ ವರದಿಗಾರನಾದ. ನಾನು ಆಗ ವಾರ್ತಾ ಇಲಾಖೆ ಸೇರಿಕೊಂಡಿದ್ದೆ. ಕುಟುಂಬದ ಹತ್ತಾರು ಮದುವೆ ಸಮಾರಂಭಗಳಲ್ಲಿ ಸಿಗುತ್ತಿದ್ದ. ಮೊದಮೊದಲು ಇಂತಹ ಕೌಟುಂಬಿಕ ಕಾರ್ಯಕ್ರಮಗಳಿಗೆ ಅವರ ಶ್ರೀಮತಿ ಮೀರಾ ಮಾತ್ರ ಬರುತ್ತಿದ್ದರು. ಕ್ರಮೇಣ ಗಂಡ ಹೆಡತಿ ಬರಲಾರಂಭಿಸಿದ್ದರು. ಕಳೆದ 2019ರಲ್ಲಿ ನನ್ನ ಚಿಕ್ಕಮ್ಮನ ಮಗ ಅವನ ಮಗನ ಉಪನಯನ ಮಾಡಿದ್ದ. ಅಲ್ಲಿಗೆ ಗಂಡ ಹೆಂಡತಿ ಇಬ್ಬರೂ ಬಂದಿದ್ದರು. ನಾವು ಬಹಳ ಸಮಯ ಹಳೆಯ ಸಂಗತಿಗಳನ್ನು ಮೆಲುಕು ಹಾಕಿದ್ದೆವು. 20 ದಿನಗಳ ಹಿಂದೆ ಕೆ.ಜೈರಾಜ್ ಅವರ ರಾಜಮಾರ್ಗ ಕೃತಿ ಬೇಕು ಅಂತ ಸಂದೇಶ ಕಳುಹಿಸಿದ್ದ. ಕೂಡಲೇ ನನ್ನ ಇನ್ನೂ 3-4 ಪುಸ್ತಕಗಳೊಂದಿಗೆ ಅಂಚೆ ಪಾರ್ಸಲ್ ಕಳುಹಿಸಿದೆ. ಎಂತಹ ಓದುಗ ಎಂದರೆ ಪುಸ್ತಕಗಳು ತಲುಪಿದ ಮರು ದಿನವೇ ರಾಜಮಾರ್ಗದಲ್ಲಿ ಕೆಲವು ಪುಟಗಳು ಕಾಣೆಯಾಗಿವೆ ಎಂದು ಮೆಸೇಜ್ ಹಾಕಿದ. ಸರಿಪಡಿಸುತ್ತೇನೆ ಎಂದು ಮರು ಮೆಸೇಜ್ ಕಳುಹಿಸಿದೆ. ಬೇರೆ ಪುಸ್ತಕ ಕಳುಹಿಸಲು ಸಾಧ್ಯವಾಗಲೇ ಇಲ್ಲ. ವಿಜಯೇಂದ್ರನ ಅಣ್ಣ ಗೋಪಾಲರಾವ್ ನನಗೆ ಬಹಳ ಆತ್ಮೀಯರು. ಪದಬಂಧ ಪ್ರೇಮಿ. ವಿಜಯೇಂದ್ರ ಬಹಳ ಬೇಗ ನಮ್ಮನ್ನು ಅಗಲಿದ. ಅವನ ಆತ್ಮಕ್ಕೆ ಶಾಂತಿ ದೊರೆಯಲಿ. ಶ್ರೀಮತಿ ಮೀರಾ, ಕುಟುಂಬ ಈ ದುಖಃ ತಡೆದುಕೊಳ್ಳುವಂತಾಗಲಿ.
ನನ್ನ ಅಂತಿಮ ನಮನಗಳು ವಿಜಯೇಂದ್ರ
ನನ್ನ ಅಂತಿಮ ನಮನಗಳು ವಿಜಯೇಂದ್ರ
Subscribe to:
Posts (Atom)














































